ಭಾರತೀಯ ಭಾಷೆಗಳಿಗೆ ವಾಯ್ಸ್ ಸೂಟ್

ನಿಮ್ಮ ಗ್ರಾಹಕರೊಂದಿಗೆ ಅವರ ಆಯ್ಕೆಯ ಭಾಷೆಯಲ್ಲಿ ಮಾತನಾಡಿ

ಧ್ವನಿಯು ಸಂವಹನದ ಅತ್ಯಂತ ಸ್ವಾಭಾವಿಕ ಮಾರ್ಗವಾಗಿದೆ ಮತ್ತು ಇದು ಓದುವುದು, ಬರೆಯುವುದು ಮತ್ತು ಟೈಪ್ ಮಾಡುವ ಸಂವಹನಗಳ ಪ್ರಕಾರಗಳನ್ನು ಮೊದಲುಗೊಳ್ಳುತ್ತದೆ. ಹೆಚ್ಚುವರಿಯಾಗಿ, ಎರಡನೆಯದು, ವಿನ್ಯಾಸದಿಂದ ಅನಕ್ಷರಸ್ಥರನ್ನು ಅಂತರ್ಗತಗೊಳ್ಳದ ಕಾರಣ, ಸಂಪರ್ಕಿತ ಗ್ರಾಹಕರ ಹೆಚ್ಚಿನ ಸಾಕ್ಷರತೆಯ ಮಟ್ಟವನ್ನು ಬಯಸುತ್ತದೆ. ಈ ಸಾಕ್ಷರತೆಯ ತಡೆಗೋಡೆಯನ್ನು ದಾಟಲು ಮತ್ತು ವಾಯ್ಸ್-ಫಸ್ಟ್ ಡಿವೈಸ್‌ಗಳಲ್ಲಿ ಸುಲಲಿತವಾಗಿ ಸಂವಹನ ನಡೆಸಲು ನಿಮ್ಮ ಗ್ರಾಹಕರಿಗೆ ಸಹಾಯ ಮಾಡಲು ರೆವೆರಿಯ ಭಾರತೀಯ ಭಾಷೆಯ ವಾಯ್ಸ್ ಸೂಟ್ ನಿಮಗೆ ಅನುವು ಮಾಡಿಕೊಡುತ್ತದೆ. ಅದರ ಅಂತರ್ನಿರ್ಮಿತ ಕಾರ್ಯಕ್ಷೇತ್ರ-ನಿರ್ದಿಷ್ಟ ಶಬ್ದಕೋಶ ಮಾದರಿಗಳೊಂದಿಗೆ, ಈ ಸೂಟ್, ವ್ಯವಹಾರಗಳು ಹಾಗೂ ಕೈಗಾರಿಕೆಗಳಿಗೆ ಹೆಚ್ಚಿನ ನಿಖರತೆಗಳನ್ನು ಒದಗಿಸುತ್ತದೆ.

11 ಭಾರತೀಯ ಭಾಷೆಗಳಲ್ಲಿ ನೈಜ ಸಮಯದಲ್ಲಿ ನಿಮ್ಮ ವೆಬ್‌ಸೈಟ್‌ನ ಅನುವಾದ

ನೈಜ-ಸಮಯದ ಪ್ರತಿಲೇಖನ

ಬಳಕೆದಾರರ ಉದ್ದೇಶವನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ವಿವಿಧ ಭಾರತೀಯ ಭಾಷೆಗಳಲ್ಲಿ ನಿಖರವಾದ ಧ್ವನಿ ಉತ್ಪನ್ನಗಳನ್ನು ಸಕ್ರಿಯಗೊಳಿಸುವಲ್ಲಿ ರಿವೆರಿಯ ದ್ವನಿಯಿಂದ-ಪಠ್ಯ (ಎಸ್‌.ಟಿ.ಟಿ) ಮತ್ತು ಪಠ್ಯದಿಂದ-ದ್ವನಿಯ (ಟಿ.ಟಿ.ಎಸ್) ತಂತ್ರಜ್ಞಾನಗಳು ನೈಜ ಸಮಯದಲ್ಲಿ ಕಾರ್ಯನಿರ್ವಹಿಸುತ್ತವೆ. ಸಂವಾದಾತ್ಮಕ ಎಸ್‌.ಟಿ.ಟಿ ರೂಪಾಂತರವನ್ನು ಬೆಂಬಲಿಸುವ, ಆಯಾ ಉದ್ಯಮಕ್ಕೆ ತಕ್ಕ ಶಬ್ದಕೋಶ ಮತ್ತು ಭಾಷಾ ಮಾದರಿಗಳ ಮೇಲೆ ಎಸ್‌.ಟಿ.ಟಿ ಅಪ್ಲಿಕೇಶನ್ ಅನ್ನು ನಿರ್ಮಿಸಲಾಗಿದೆ. ಇದು ಭಾರತೀಯ ಭಾಷೆಯನ್ನು ಮಾತನಾಡುವವರಲ್ಲಿ ಸಾಮಾನ್ಯವಾಗಿರುವ ದ್ವಿಭಾಷಾ ನುಡಿಗಳ ಸಂಭವವನ್ನು ಗುರುತಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಟಿ.ಟಿ.ಎಸ್ ಟೂಲ್ ಅನ್ನು ವಿವಿಧ ಭಾಷೆಗಳು ಮತ್ತು ಧ್ವನಿಗಳನ್ನು ಬಳಸಿ ತರಬೇತಿ ನೀಡಲಾಗಿದೆ ಮತ್ತು ಸಾಂಸ್ಕೃತಿಕ ಒಳಾರ್ಥಗಳನ್ನು ಹೊಂದಿರುವ ವೈಯಕ್ತೀಕರಿಸಿದ ಉಚ್ಚಾರಣೆಗಳಿಗೆ ಬಹುಭಾಷಾ ನಿಘಂಟಿನ ಬೆಂಬಲವನ್ನು ಒಳಗೊಂಡಿದೆ.

ಗ್ರಾಹಕರ ಅವಶ್ಯಕತೆಯನುಸಾರ ಭಾರತೀಯ ಭಾಷೆಯ ಶಬ್ದಕೋಶಗಳು

ಉತ್ಪನ್ನದ ಹೆಸರುಗಳು, ಕಾರ್ಯಕ್ಷೇತ್ರ-ಆಧಾರಿತ ಪರಿಭಾಷೆಗಳು ಅಥವಾ ವ್ಯಕ್ತಿಗಳ ಹೆಸರುಗಳಂತಹ ನಿಮ್ಮ ಬಳಕೆಯ ಸಂದರ್ಭಕ್ಕೆ ನಿರ್ದಿಷ್ಟವಾದ ನಿಖರವಾದ ಪ್ರತಿಲೇಖನಗಳನ್ನು ರಚಿಸಲು ಧ್ವನಿ ಗುರುತಿಸುವಿಕೆಯ ಶಬ್ದಕೋಶವನ್ನು ಸರಿಹೊಂದಿಸಲು ವಾಯ್ಸ್ ಸೂಟ್ ನಿಮಗೆ ಅನುಮತಿಸುತ್ತದೆ. ಹಾಗೆಯೇ ಈ ಗ್ರಾಹಕೀಯಗೊಳಿಸಬಹುದಾದ ವೈಶಿಷ್ಟ್ಯಗಳು ನಿರ್ದಿಷ್ಟ ಉದ್ಯಮಗಳು ಮತ್ತು ನೇರ ಮಾರುಕಟ್ಟೆಗಳಿಗೆ ಸಂಬಂಧಿಸಿದ ಹೆಸರಿಸುವ ಮತ್ತು ಪರಿಭಾಷೆಯ ಸಂಪ್ರದಾಯಗಳಲ್ಲಿ ಸ್ಥಿರತೆಯನ್ನು ಖಚಿತಪಡಿಸುತ್ತದೆ.

ಔದ್ಯಮಕ್ಕೆ ತಕ್ಕಂತಹ ಭಾಷಾ ಮಾದರಿಗಳು

ಭಾರತೀಯ ಭಾಷೆಯ ಧ್ವನಿ ಸೂಟ್ ಅನ್ನು ಕಾರ್ಯಕ್ಷೇತ್ರ ಅಥವಾ ಉದ್ಯಮಕ್ಕನುಗುನವಾದ ಭಾಷಾ ಮಾದರಿಗಳಲ್ಲಿ ನಿರ್ಮಿಸಲಾಗಿದೆ. ಇದರರ್ಥ ಉದ್ಯಮದ ಪರಿಭಾಷೆಗಳು ಮತ್ತು ಧ್ವನಿ ಉತ್ಪನ್ನಗಳ ವಿಷಯದಲ್ಲಿ ಹೆಚ್ಚಿನ ನಿಖರತೆಯನ್ನು ನೀಡುವಾಗ ಭಾಷಾ ಮಾದರಿಗಳನ್ನು ಬ್ಯಾಂಕಿಂಗ್, ಹಣಕಾಸು, ವಿಮೆ ಮತ್ತು ಮುಂತಾದ ಉದ್ಯಮಗಳಿಗೆ ಸಮಂಜಸವಾದ ದತ್ತಾಂಶಗಳ ಮೇಲೆ ತರಬೇತಿ ನೀಡಿ ನಿರ್ಮಿಸಲಾಗಿದೆ. ನಿಮ್ಮ ಗ್ರಾಹಕರಿಗೆ ಅವರ ಸ್ಥಳೀಯ ಭಾಷೆಗಳಲ್ಲಿ ಸೇವೆ ಸಲ್ಲಿಸಲು ನೀವು ಈಗ ನಿಮ್ಮ ಅಸ್ತಿತ್ವದಲ್ಲಿರುವ ಬಾಟ್‌ಗಳು ಮತ್ತು ವರ್ಚುವಲ್ ಅಸಿಸ್ಟಂಟ್‌ಗಳಿಗೆ ಭಾರತೀಯ ಭಾಷೆಯ ಧ್ವನಿ ಸೂಕ್ಷ್ಮ ವ್ಯತ್ಯಾಸಗಳನ್ನು ಸುಲಭವಾಗಿ ಸಂಯೋಜಿಸಬಹುದು.

ಅತ್ಯಂತ ನಿಖರ ಮತ್ತು ಮನುಷ್ಯನ ಉಚ್ಚಾರಣೆಯಂತಹ ಹೋಲಿಕೆ

ಭಾರತೀಯ ಭಾಷೆಯ ಪದಗಳ ಹೆಚ್ಚು ನಿಖರವಾದ ಉಚ್ಚಾರಣೆಯೊಂದಿಗೆ ಉನ್ನತ-ಗುಣಮಟ್ಟದ ಧ್ವನಿ ಉತ್ಪಾದನೆಯನ್ನು ತಲುಪಿಸಲು ರೆವೆರಿಯ ಧ್ವನಿ ತಂತ್ರಜ್ಞಾನಗಳು ನಿಮಗೆ ಅನುವು ಮಾಡಿಕೊಡುತ್ತದೆ. ವಿಭಿನ್ನ ಮಾನವ ಗುಣಲಕ್ಷಣಗಳನ್ನು ಒದಗಿಸಲು ವಿಭಿನ್ನ ಸ್ವರಮಟ್ಟಗಳು ಮತ್ತು ಸ್ವರಗಳ ಗುಣಮಟ್ಟಗಳೊಂದಿಗೆ ಸಾಮನ್ಯ ಗಂಡು ಮತ್ತು ಹೆಣ್ಣಿನ ಧ್ವನಿಗಳು ಇರುವ  ಪರಿಹಾರವು ವ್ಯಾಪಕವಾದ ಆಯ್ಕೆಯನ್ನು ಒದಗಿಸುತ್ತದೆ.

ಬಹು ಭಾರತೀಯ ಉಚ್ಚಾರಣೆಗಳು ಮತ್ತು ಆಡುಭಾಷೆಗಳು

ರೆವೆರಿಯ ಭಾರತೀಯ-ಭಾಷೆಯ ವಾಯ್ಸ್ ಸೂಟ್ ಅನ್ನು ಅನೇಕ ಭಾರತೀಯ ಭಾಷೆಗಳ ಮೇಲೆ, ಅವುಗಳ ಸಾಂಸ್ಕೃತಿಕ ಮತ್ತು ಭಾಷಾ ಸೂಕ್ಷ್ಮಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾ ಪ್ರತ್ಯೇಕವಾಗಿ ತರಬೇತಿ ನೀಡಲಾಗುತ್ತದೆ. ಭಾರತೀಯ ಭಾಷೆಗಳ ವೈವಿಧ್ಯತೆಯ ಸಂಕೀರ್ಣತೆಗಳು ಪ್ರತಿಯೊಂದು ಭಾಷೆಗೆ ಸಂಬಂಧಿಸಿದ ಉಚ್ಚಾರಣೆಗಳು ಮತ್ತು ಉಪಭಾಷೆಗಳಿಂದ ಹೆಚ್ಚು ಜಟಿಲವಾಗಿರುತ್ತವೆ. ನಮ್ಮ ವಾಯ್ಸ್ ಸೂಟ್ ಅಂತಹ ವೈವಿಧ್ಯಮಯ ಉಚ್ಚಾರಣೆಗಳು ಮತ್ತು ಉಪಭಾಷೆಗಳನ್ನು ಗುರುತಿಸುತ್ತದೆ, ಸಂದರ್ಭ ಮತ್ತು ಬಳಕೆದಾರರ ಉದ್ದೇಶವನ್ನು ನಿಖರವಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ಸಂಕೀರ್ಣ ಕಾರ್ಯಗಳನ್ನು ನಿರ್ವಹಿಸಲು ಬಳಕೆದಾರರೊಂದಿಗೆ ಸಂವಹನ ನಡೆಸುತ್ತದೆ.

ಸವಾಲಿನ ಬಳಕೆಯ ಸಂದರ್ಭಗಳಿಗೆ ನಾವು ಮುಕ್ತವಾಗಿ ಸ್ಪಂದಿಸುತ್ತೇವೆ. ನಿಮ್ಮ ಅಗತ್ಯಗಳನ್ನು ಆಧರಿಸಿ ನಾವು ನಮ್ಮ ಪರಿಹಾರಗಳನ್ನು ಅದಕ್ಕೆ ತಕ್ಕಂತೆ ಅಳವಡಿಸಿಕೊಡುತ್ತೇವೆ.

ನಮ್ಮ ಉತ್ಪನ್ನಗಳ ಬಗ್ಗೆ ತಿಳಿಯುವುದರಲ್ಲಿ ಮೊದಲಿಗರಾಗಿರಿ

ನಾವು ಎಲ್ಲೆಡೆ ಇದ್ದೇವೆ. ಬನ್ನಿ, ಹಾಯ್ ಹೇಳಿ!