ಬಹುಭಾಷಾ ಇಂಡಿಕ್ ಕೀಬೋರ್ಡ್ (ಸ್ವಲೇಖ್)

ಕೇವಲ ಒಂದು ಬಟನ್ ಅನ್ನು ಸ್ಪರ್ಶಿಸುವ ಮೂಲಕ ನಿಮ್ಮ ಬಳಕೆದಾರರು ತಮ್ಮ ಆದ್ಯತೆಯ ಭಾಷೆಯಲ್ಲಿ ಟೈಪ್ ಮಾಡಲು ಅವಕಾಶ ಕಲ್ಪಿಸಿ

ಸ್ವಲೇಖ್ ಬಹುಭಾಷಾ ಇಂಡಿಕ್ ಕೀಬೋರ್ಡ್ ಆಗಿದ್ದು, ಬಳಕೆದಾರರು ನಿಮ್ಮ ಅಪ್ಲಿಕೇಶನ್‌ನಲ್ಲಿ ತಮ್ಮ ಆಯ್ಕೆಯ ಭಾಷೆಯಲ್ಲಿ ಟೈಪ್ ಮಾಡಲು ಮತ್ತು ಸಂವಹನ ನಡೆಸಲು ಸಹಾಯ ಮಾಡುತ್ತದೆ. ಸಂಯೋಜಿಸಲು ಸುಲಭವಾದ - ಎಸ್.‌ಡಿ.ಕೆಯಾಗಿ ಲಭ್ಯವಿದೆ.

ನಿಮ್ಮ ಆಯ್ಕೆಯ ಭಾಷೆಯಲ್ಲಿ ಅಭಿವ್ಯಕ್ತಿಯ ಅನುಕೂಲತೆಯನ್ನು ಆನಂದಿಸಿ

ಅಪ್ಲಿಕೇಶನ್‌ಗಳೊಂದಿಗೆ ತ್ವರಿತ ಮತ್ತು ಸುಲಭ ಏಕೀಕರಣ

ನಿಮ್ಮ ಅಪ್ಲಿಕೇಶನ್‌ನೊಂದಿಗೆ ಬಹುಭಾಷಾ ಕೀಬೋರ್ಡ್ ಅನ್ನು ಕನಿಷ್ಠ ಅಭಿವೃದ್ಧಿಯೊಂದಿಗೆ ಸಂಯೋಜಿಸಿ. ನಿಮ್ಮ ಅಪ್ಲಿಕೇಶನ್‌ಗೆ ಕೆಲವು ಸಾಲುಗಳ ಕೋಡ್‌ನೊಂದಿಗೆ ಸಂಯೋಜಿಸಬಹುದಾದ, ಕಾರ್ಯಗತಗೊಳಿಸಲು ಸುಲಭವಾದ ಎಸ್.‌ಡಿ.ಕೆ ಲೈಬ್ರರಿ ಪ್ಯಾಕೇಜ್ ನೊಂದಿಗೆ ಸ್ವಲೇಖ್ ಬರುತ್ತದೆ.

ಈಗಲೇ ಪ್ರಾರಂಭಿಸಿ

ಇಂಡಿಕ್ ಭಾಷೆಯ ಟೈಪಿಂಗ್ ಅನ್ನು ಸರಳಗೊಳಿಸಿ

ನಿಮ್ಮ ಬಳಕೆದಾರರು ತಮ್ಮ ಸಾಧನಗಳಲ್ಲಿ ಇಂಡಿಕ್ ಟೈಪಿಂಗ್ ಲಭ್ಯತೆಯ ಬಗ್ಗೆ ತಲೆಕೆಡಿಸಿಕೊಳ್ಳದಂತೆ ನೋಡಿಕೊಳ್ಳಿ. ಸ್ವಲೇಖ್ ಎಸ್.‌ಡಿ.ಕೆ 11 ವಿಭಿನ್ನ ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ: ಹಿಂದಿ, ಬೆಂಗಾಲಿ, ಪಂಜಾಬಿ, ಅಸ್ಸಾಮೀಸ್, ಗುಜರಾತಿ, ಮರಾಠಿ, ಒಡಿಯಾ, ತಮಿಳು, ತೆಲುಗು, ಕನ್ನಡ, ಮತ್ತು ಮಲಯಾಳಂ.

ಈಗಲೇ ಪ್ರಾರಂಭಿಸಿ

ನಿಮ್ಮ ಬಳಕೆದಾರರ ವ್ಯಾಪ್ತಿಯನ್ನು ಹೆಚ್ಚಿಸಿ

ಡಿಜಿಟಲ್ ಸಾಕ್ಷರತೆ ಹೆಚ್ಚಿರುವ ಮತ್ತು ಇಂಗ್ಲೀಷ್ ಭಾಷೆಯ ಸಾಕ್ಷರತೆ ಕಡಿಮೆ ಇರುವ ಬಳಕೆದಾರರ ವಿಭಾಗವನ್ನು ತಲುಪಿ. ನಿಮ್ಮ ಅಪ್ಲಿಕೇಶನ್‌ನೊಂದಿಗೆ ಬಳಕೆದಾರರ ಸಂವಹನವನ್ನು ಸುಧಾರಿಸುವುದರೊಂದಿಗೆ, ತಮ್ಮದೇ ಭಾಷೆಯಲ್ಲಿ ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಸಂವಹನ ನಡೆಸಲು ಸ್ವಲೇಖ್ ಅವರಿಗೆ ಅನುವು ಮಾಡಿಕೊಡುತ್ತದೆ - ಅವಕಾಶಗಳ ಜಗತ್ತನ್ನೇ ತೆರೆದಿಡುತ್ತದೆ.

ಈಗಲೇ ಪ್ರಾರಂಭಿಸಿ

ಬಳಕೆದಾರರು ತಮ್ಮ ಸ್ಥಳೀಯ ಭಾಷೆಯಲ್ಲಿ ವೇಗವಾಗಿ ಮತ್ತು ಚುರುಕಾಗಿ ಟೈಪ್ ಮಾಡಲು ಅವಕಾಶ ಮಾಡಿಕೊಡಿ

ಬಹುಭಾಷಾ ಮುನ್ಸೂಚಕ ಕೀಬೋರ್ಡ್‌ನೊಂದಿಗೆ ನಿಮ್ಮ ಅಪ್ಲಿಕೇಶನ್‌ನಲ್ಲಿ ಟೈಪ್ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಿ. ಬಳಕೆದಾರರು ಟೈಪ್ ಮಾಡಿದ ಆಧಾರದ ಮೇಲೆ ಆಯ್ಕೆ ಮಾಡಿದ ಭಾಷೆಯಲ್ಲಿ ಪದಗಳನ್ನು ಸ್ವಲೇಕ್ ಕೀಬೋರ್ಡ್ ಸೂಚಿಸುತ್ತದೆ. ಈ ಕೀಪ್ಯಾಡ್ ಇಂಗ್ಲಿಷ್ ಮತ್ತು ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಮುನ್ಸೂಚನೆಯನ್ನು ನೀಡುವುದಲ್ಲದೆ ದ್ವಿಭಾಷಾ ಮುನ್ಸೂಚನೆಯನ್ನೂ ಲಭ್ಯವಾಗುವಂತೆ ಮಾಡುತ್ತದೆ.

ಈಗಲೇ ಪ್ರಾರಂಭಿಸಿ

ಬಳಕೆದಾರರ ಟೈಪಿಂಗ್ ನಿಖರತೆಯನ್ನು ಸುಧಾರಿಸಿ

ಬಳಕೆದಾರರು ತಮ್ಮ ಆಯ್ಕೆಯ ಭಾಷೆಯನ್ನು ಟೈಪ್ ಮಾಡಲು ಅನುಮತಿಸಿ ಮತ್ತು ಸ್ವಲೇಖ್ ನ ಮುನ್ಸೂಚಕ ಟೈಪಿಂಗ್ ಮತ್ತು ಇತರೆ ವೈಶಿಷ್ಟ್ಯಗಳೊಂದಿಗೆ ಅವರಿಗೆ ಸಹಾಯ ಮಾಡಿ. ಬಳಕೆದಾರರು ಈಗ ಹೆಚ್ಚಿನ ನಿಖರತೆಯೊಂದಿಗೆ ಪಠ್ಯವನ್ನು ಇನ್ಪುಟ್ ಮಾಡಬಹುದು ಮತ್ತು ಇಂಡಿಕ್ ಸ್ಕ್ರಿಪ್ಟ್‌ಗಳನ್ನು ಟೈಪ್ ಮಾಡುವಾಗ ಸಾಮಾನ್ಯವಾಗಿ ಕಂಡುಬರುವ ಸಂಯೋಜಕಗಳನ್ನು ಸಂಯೋಜಿಸುವಂತಹ ವಿಶಿಷ್ಟ ದೋಷಗಳನ್ನು ತಪ್ಪಿಸಬಹುದು.

ಈಗಲೇ ಪ್ರಾರಂಭಿಸಿ

ಬಹು ಭಾಷೆಗಳು

22 ಜನಪ್ರಿಯ ಭಾರತೀಯ ಭಾಷೆಗಳ ಮೆನುವಿನಿಂದ ನಿಮ್ಮ ಆದ್ಯತೆಯ ಭಾಷೆಯನ್ನು ಆರಿಸಿ. ಸ್ವಲೇಖ್ ಸಂಪೂರ್ಣ ಸ್ಥಳೀಕರಿಸಿದ ಮೆನು ಅನ್ನು ಹೊಂದಿದೆ ಮತ್ತು ಈ ಕೆಳಗಿನ ಭಾಷೆಯ ಕೀಬೋರ್ಡ್‌ಗಳನ್ನು ಬೆಂಬಲಿಸುತ್ತದೆ: ಹಿಂದಿ, ಬೆಂಗಾಲಿ, ತೆಲುಗು, ಮರಾಠಿ, ತಮಿಳು, ಗುಜರಾತಿ, ಕನ್ನಡ, ಮಲಯಾಳಂ, ಒರಿಯಾ, ಪಂಜಾಬಿ, ಅಸ್ಸಾಮೀಸ್, ನೇಪಾಳಿ, ಬೋಡೋ, ಡೋಗ್ರಿ, ಕೊಂಕಣಿ, ಮೈಥಿಲಿ, ಮಣಿಪುರಿ, ಸಂಸ್ಕೃತ , ಸಿಂಧಿ, ಉರ್ದು ಮತ್ತು ಸಂತಾಲಿ

ಈಗಲೇ ಪ್ರಾರಂಭಿಸಿ

ಆಂಡ್ರಾಯ್ಡ್‌ಗಾಗಿ ಬಹುಭಾಷಾ, ಸರ್ವಸಮರ್ಥ ಕೀಬೋರ್ಡ್ ಮೂಲಕ ವಿಷಯವನ್ನು ಟೈಪ್ ಮಾಡಿ, ಹುಡುಕಿ ಮತ್ತು ಅನ್ವೇಷಿಸಿ

ನಮ್ಮ ಉತ್ಪನ್ನಗಳ ಬಗ್ಗೆ ತಿಳಿಯುವುದರಲ್ಲಿ ಮೊದಲಿಗರಾಗಿರಿ

ನಾವು ಎಲ್ಲೆಡೆ ಇದ್ದೇವೆ. ಬನ್ನಿ, ಹಾಯ್ ಹೇಳಿ!