ನಮ್ಮ ಬಗ್ಗೆ

2009 ರಿಂದ ಡಿಜಿಟಲ್-ಅಂತರ್ಗತ ಭಾರತದ ನಿರ್ಮಾಣ


ರೆವೆರಿ ಉದ್ದೇಶಗಳಿಗೆ ಮೊದಲ ಆದ್ಯತೆಯನ್ನು ನೀಡುವ ಒಂದು ಕಂಪನಿಯಾಗಿದೆ. ನಾವು 2009 ರಿಂದ ಭಾರತೀಯ ಅಂತರ್ಜಾಲದಲ್ಲಿ ಭಾಷಾ ಸಮಾನತೆಯನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಭಾಷಾ ತಂತ್ರಜ್ಞಾನಗಳು ಬಿ.ಎಫ್.‌ಎಸ್.ಐ, ಶಿಕ್ಷಣ, ಮಾಧ್ಯಮ ಮತ್ತು ಮನರಂಜನೆ, ಇ-ಕಾಮರ್ಸ್ ಮತ್ತು ಭಾರತೀಯ ಸರ್ಕಾರ ಸೇರಿದಂತೆ ವಿವಿಧ ಉದ್ಯಮಗಳನ್ನು ಸಶಕ್ತಗೊಳಿಸುತ್ತಿದೆ.


ನಾವು 3*3 ಧ್ಯೇಯವನ್ನು ಹೊಂದಿದ್ದೇವೆ:

ನಮ್ಮ ತಂತ್ರಜ್ಞಾನಗಳ ಮೂಲಕ ಕನಿಷ್ಠ 500 ದಶಲಕ್ಷ ಜನರ ಜೀವನದ ಮೇಲೆ ಅರ್ಥಪೂರ್ಣವಾಗಿ ಪ್ರಭಾವ ಬೀರುವುದು.

ಭಾರತವು ವ್ಯಾಖ್ಯಾನಿಸಿದ ಮತ್ತು ಹೊಂದಿರುವ ಭಾರತೀಯ ಭಾಷೆಗಳಿಗೆ ಸೂಕ್ತವಾದ ಭಾಷಾ ಮಾನದಂಡಗಳನ್ನು ಸ್ಥಾಪಿಸುವುದು.

ಬಳಕೆದಾರರ ಡಿಜಿಟಲ್ ಪ್ರಯಾಣದಾದ್ಯಂತ ಸಂಪೂರ್ಣ ಭಾಷಾ ತೊಡಗಿಸಿಕೊಳ್ಳುವಿಕೆಯ ಅನುಭವವನ್ನು ಒದಗಿಸುವ ಮೂಲಕ ಆಯ್ಕೆಯ ಭಾಷಾ ವೇದಿಕೆಯಾಗುವುದು, ಇದು ಲಕ್ಷಾಂತರ ಭಾರತೀಯರಿಗೆ ಇಂಟರ್ನೆಟ್ ಅಳವಡಿಕೆಯನ್ನು ಸುಲಭವಾಗಿಸುತ್ತದೆ ಮತ್ತು ತ್ವರಿತಗೊಳಿಸುತ್ತದೆ.

30ದಶಲಕ್ಷ+

ಬಳಕೆದಾರರನ್ನು ಸಶಕ್ತಗೊಳಿಸಲಾಗಿದೆ

2ಬಿಲಿಯನ್+

ಪದಗಳನ್ನು ಸ್ಥಳೀಕರಿಸಲಾಗಿದೆ

200ದಶಲಕ್ಷ+

ಡಿವೈಸ್ ಗಳು  ಬೆಂಬಲಿತವಾಗಿದೆ

1.5ದಶಲಕ್ಷ+

ಇಂಡಿಕ್ ಆ್ಯಪ್ ಡೌನ್‌ಲೋಡ್‌ಗಳು

22ಭಾರತೀಯ

ಭಾಷೆಗಳನ್ನು ಬೆಂಬಲಿಸಲಾಗಿದೆ

ಇಲ್ಲಿಯವರೆಗಿನ ನಮ್ಮ ಪ್ರಯಾಣದ ಒಂದು ನಸುನೋಟ

ಪ್ರಿಲೋಡರ್
 • 2009

  2009

  ಮೊಬೈಲ್ ಫೋನ್‌ಗಳಲ್ಲಿನ ಭಾರತೀಯ ಭಾಷೆಯ ಕಂಪ್ಯೂಟಿಂಗ್ ಸಮಸ್ಯೆಗಳನ್ನು ಪರಿಹರಿಸುವ ಗುರಿಯೊಂದಿಗೆ ಸ್ಥಾಪಿಸಲಾಯಿತು.

 • 2010

  2010

  ಲಿಪ್ಯಂತರಣ, ಫಾಂಟ್ ಸಾಮರ್ಥ್ಯಗಳು ಮತ್ತು ಸೆಟ್-ಟಾಪ್ ಬಾಕ್ಸ್‌ಗಳ ಪ್ರದರ್ಶನ ಪರಿಹಾರಗಳಿಗಾಗಿ ನಮ್ಮ ಪ್ರದರ್ಶನಗಳ ಆಧಾರದ ಮೇಲೆ ವೈರ್‌ಲೆಸ್ ತಂತ್ರಜ್ಞಾನದಲ್ಲಿನ ಶ್ರೇಷ್ಠತಾ ಕೇಂದ್ರದಿಂದ ಉದ್ಯಮ ಶಿಫಾರಸುಗಳನ್ನು ನೀಡಲಾಯಿತು.

 • 2011

  2011

  ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಹೆಚ್ಚು ಲಭ್ಯವಾಗುವಂತೆ ಮಾಡುವ ಉದ್ಯಮಿಗಳಿಗೆ ನೀಡುವ ಕ್ವಾಲ್ಕಾಮ್ ಕ್ಯೂ ‌ನ ಬಹುಮಾನವನ್ನು ಪಡೆದುಕೊಳ್ಳಲಾಯಿತು.

 • 2012

  2012

  ಕ್ವಾಲ್ಕಾಮ್‌ನೊಂದಿಗಿನ ನಮ್ಮ ಸಹಭಾಗಿತ್ವದ ಮೂಲಕ ಸ್ಮಾರ್ಟ್‌ಫೋನ್‌ಗಳಲ್ಲಿ ಭಾರತೀಯ ಭಾಷಾ ಬೆಂಬಲವನ್ನು ಹೊಂದಿರುವ ವಿಶ್ವದ ಮೊದಲ ಕಂಪನಿಯಾದೆವು.

 • 2013

  2013

  ಓ.ಇ.ಎಂ ಎಂಟರ್‌ಪ್ರೈಸ್ ಗ್ರಾಹಕರಾದ ಮೈಕ್ರೋಮ್ಯಾಕ್ಸ್, ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್, ಇತ್ಯಾದಿಗಳನ್ನು ಆನ್‌ಬೋರ್ಡ್‌ ಮಾಡಲಾಯಿತು, ಮಾರುಕಟ್ಟೆಗಳು ಫೀಚರ್ ಫೋನ್‌ಗಳಿಂದ ಸ್ಮಾರ್ಟ್‌ಫೋನ್‌ಗಳಿಗೆ ಪರಿವರ್ತನೆಗೊಳ್ಳಲು ಪ್ರಾರಂಭಿಸಿದಾಗ, ನಾವು ಲಾಂಗ್ವೇಜ್- ಆಸ್-ಎ-ಸರ್ವೀಸ್ (Laas) ವೇದಿಕೆ ಮತ್ತು ಬಹುಭಾಷಾ ರೆವೆರಿ ಫೋನ್‌ಬುಕ್ ಅನ್ನು ಪ್ರಾರಂಭಿಸಿದೆವು.

 • 2014

  2014

  ಆಧಾರವಾಕ್ಯದ ಪರಿಹಾರವಾಗಿ ನಮ್ಮ ಮೊದಲ ಲಾಂಗ್ವೇಜ್- ಆಸ್-ಎ-ಸರ್ವೀಸ್ ತಂತ್ರಜ್ಞಾನವನ್ನು ಪ್ರಾರಂಭಿಸಿದೆವು ಮತ್ತು ನಮ್ಮ ಮೊದಲ ಉದ್ಯಮ ಗ್ರಾಹಕರಾದ ಅಕ್ಸೆಂಚರ್, ಹಂಗಮಾ, ಎಚ್‌.ಡಿ.ಎಫ್.‌ಸಿ ಸೆಕ್ಯುರಿಟೀಸ್ ಇತ್ಯಾದಿಗಳನ್ನು ಆನ್‌ಬೋರ್ಡ್ ಮಾಡಿದೆವು.

  ನಮ್ಮ ಮೊದಲ ಸರ್ಕಾರಿ ಯೋಜನೆಯನ್ನು ಪಡೆದುಕೊಂಡೆವು

 • 2015

  2015

  $4 ಮಿಲಿಯನ್ ಸೀರೀಸ್ ಎ ಹಣವನ್ನು ಸಂಗ್ರಹಿಸಲಾಯಿತು.

  ಲಾಸ್ 2.0 ಅನ್ನು ಕ್ಲೌಡ್ ವೇದಿಕೆಯಂತೆ ಪ್ರಾರಂಭಿಸಲಾಯಿತು ಮತ್ತು ಸ್ನ್ಯಾಪ್‌ಡೀಲ್, ಅಭಿಬಸ್, ಮುಂತಾದ ಹೆಚ್ಚಿನ ಉದ್ಯಮ ಗ್ರಾಹಕರನ್ನು ಆನ್‌ಬೋರ್ಡ್ ಮಾಡಲಾಯಿತು.

  ನಮ್ಮ ಹಿಂದಿನ ಕೆಲವು ಭಾಷಾ ಉತ್ಪನ್ನಗಳಾದ ಬಹುಭಾಷಾ ಕೀಪ್ಯಾಡ್, ಸ್ವಲೇಖ್, ಫೋನ್‌ಬುಕ್ ಮತ್ತು ಲಾಕ್ ಸ್ಕ್ರೀನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪ್ರಾರಂಭಿಸಲಾಯಿತು.

 • 2016

  2016

  ರೆವೆರಿಯ ಯಂತ್ರಾನುವಾದದ (ಎಂ.ಟಿ) ಮೊದಲ ಆವೃತ್ತಿಯನ್ನು ಪ್ರಾರಂಭಿಸಲಾಯಿತು ಮತ್ತು ಇಂಟೆಕ್ಸ್, ಇಕ್ಸಿಗೋ, ಮೊಬಿಕ್ವಿಕ್ ಇತ್ಯಾದಿಗಳನ್ನು ಸೇರಿಸಿಕೊಳ್ಳುವುದರೊಂದಿಗೆ ನಮ್ಮ ಉದ್ಯಮದ ಕಸ್ಟಮರ್ ಬೇಸ್ ಅನ್ನು ವಿಸ್ತರಿಸಲಾಯಿತು.

 • 2018

  2018

  ಸುಧಾರಿತ ರೆವರಿ ಎಂ.ಟಿ ಪ್ರಸ್ತುತಪಡಿಸುವ, ಪ್ರಬಂಧಕ್, ಎಂಬ ಎ.ಐ. ಸಶಕ್ತ ಅನುವಾದ ನಿರ್ವಹಣಾ ವೇದಿಕೆಯಲ್ಲಿ ನಮ್ಮ ಕೆಲಸವನ್ನು ಪ್ರಾರಂಭಿಸಲಾಯಿತು

  12 ಭಾರತೀಯ ಭಾಷೆಗಳಲ್ಲಿ , ರೆವೆರಿಯ ಮೊದಲ ಭಾರತೀಯ ಧ್ವನಿ ಸೂಟ್ ಆದ ಗೋಪಾಲ್ ಅನ್ನು ಪ್ರಾರಂಭಿಸಲಾಯಿತು.

 • 2019

  2019

  ಮುಂದಿನ ಐದು ವರ್ಷಗಳಲ್ಲಿ 500 ದಶಲಕ್ಷ+ ಬಳಕೆದಾರರ ಕಡೆಗೆ ನಮ್ಮ ವ್ಯಾಪ್ತಿ ಮತ್ತು ಪ್ರಭಾವವನ್ನು ಶೀಘ್ರಗೊಳಿಸಲು, ರಿಲಯನ್ಸ್ ಜಿಯೋ ಜೊತೆ ಕಾರ್ಯತಂತ್ರದ ಸಹಭಾಗಿತ್ವವನ್ನು ರೂಪಿಸಲಾಯಿತು.

ನಮಗೆ ಮಾನ್ಯತೆ ದೊರೆತಿದೆ

ಕ್ವಾಲ್ಕಾಮ್ ಕ್ಯೂ-ಬಹುಮಾನ, 2012
ಮೈಕ್ರೋಸಾಫ್ಟ್ ಕೋಡ್ ಆಫ್ ಆನರ್, 2014
ವೋಡಾಫೋನ್ ಆಪ್ ಸ್ಟಾರ್ ಪ್ರಶಸ್ತಿ, 2013
ಐ.ಎ.ಎಂ.ಎ.ಐ ಸದಸ್ಯ, 2017 ರಿಂದ

ರೆವೆರಿಯ ಭಾರತೀಯ ಭಾಷೆಯ ತಂತ್ರಜ್ಞಾನಗಳು 130+ ವ್ಯವಹಾರಗಳ ಮೇಲೆ ಪ್ರಾಬಲ್ಯವನ್ನು ಹೊಂದಿವೆ

ನಮ್ಮ ಹೂಡಿಕೆದಾರರು ನಮ್ಮ ಬೆನ್ನೆಲುಬಾಗಿದ್ದಾರ. ಅವರು ನಮ್ಮ ಪ್ರಯತ್ನಗಳನ್ನು ಸಂಪೂರ್ಣವಾಗಿ ಬೆಂಬಲಿಸಿ ಪ್ರೋತ್ಸಾಹಿಸುತ್ತಾರೆ

ಉತ್ತಮ ಕೆಲಸವು ಎಂದಿಗೂ ಮಾನ್ಯತೆ ಪಡೆಯದೇ ಇರುವುದಿಲ್ಲ, ಮತ್ತು ಅದಕ್ಕೆ ಪುರಾವೆ ಇಲ್ಲಿದೆ

ನಮ್ಮ ಉತ್ಪನ್ನಗಳ ಬಗ್ಗೆ ತಿಳಿಯುವುದರಲ್ಲಿ ಮೊದಲಿಗರಾಗಿರಿ

ನಾವು ಎಲ್ಲೆಡೆ ಇದ್ದೇವೆ. ಬನ್ನಿ, ಹಾಯ್ ಹೇಳಿ!